Rajani has written this, please read, nice poem
ಆಗಸದಲ್ಲಿ ಮೋಡಗಳ ನಡುವೆ ಸಾಗುತ್ತಿದ್ದೆ
ನಿನ್ನ ಪ್ರೀತಿಯೆಂಬ ಸ್ವರ್ಗ ಲೋಕಕ್ಕೆ
ನೂರಾರು ಸಿಹಿಕನಸುಗಳನ್ನು ಹೊಂದಿದ
ಸುಂದರ ಸುಮಧುರ ಕಲ್ಪನಾ ವಿಲಾಸಕ್ಕೆ
ನನ್ನ ಹೃದಯಾಂತರಾಳದಲಿ ಅಡಗಿರುವ
ನಿನ್ನ ಪ್ರೇಮ ನಿವೇದನೆಯೊಂದಿಗೆ
ಎಂದೆಂದೂ ನಿನ್ನ ಹೆಸರನ್ನೇ ಮಿಡಿಯುವ
ನನ್ನ ಹೃದಯದ ಬಡಿತದೊಂದಿಗೆ
ನಮ್ಮ ಪ್ರೀತಿಯು ಎಂದೂ ಶಾಶ್ವತವಾಗಿರಲಿ
ಎಂಬ ಮೌನ ಪ್ರಾರ್ಥನೆಯೊಂದಿಗೆ
ಆ ಚಂದಿರನೂ ನಮ್ಮ ಪ್ರೀತಿಯ ಬೆಂಬಲಿಸಲಿ
ಎಂಬ ಆಶಾಭಾವನೆಯೊಂದಿಗೆ
ಹೇಳು ಗೆಳೆಯಾ ಬರುವೆಯಾ ನನ್ನಜೊತೆ
ಬದುಕಿನ ಸುಂದರ ಪ್ರೇಮ ಪಯಣಕ್ಕೆ
ಎಂದೆಂದೂ ನಿನ್ನ ಪ್ರೀತಿಯ ಪೂಜಿಸುವ
ನನ್ನ ಭಾವನೆಗಳ ಪುಟ್ಟ ಸದನಕ್ಕೆ
ನನ್ನ ಹೃದಯದ ಒಲುಮೆಯ ಗುಡಿಯಲ್ಲಿ
ನಿನ್ನನ್ನೇ ಎಂದೆಂದೂ ನಾ ಪೂಜಿಸುತ್ತಿರುವೆ
ನಿನ್ನ ಪ್ರೇಮವೆಂಬ ಮುತ್ತಿನ ಹಾರಕ್ಕೆ
ನನ್ನ ಭಾವನೆಗಳನ್ನು ಸದಾ ಪೋಣಿಸುತ್ತಿರುವೆ
-ರಜನಿ